rtgh
Headlines

ಕೃಷಿ ನವೋದ್ಯಮ ಯೋಜನೆ: ಸ್ಟಾರ್ಟಪ್ ಅಡಿ ಗರಿಷ್ಠ 20 ಲಕ್ಷ‌ ರೂ. ವರೆಗೆ ಸಹಾಯಧನ

Agricultural Innovation Scheme

ನಮಸ್ತೆ ಕರುನಾಡು, ರಾಜ್ಯ ಕಾಂಗ್ರೆಸ್ ಸರ್ಕಾರ ಯುವಕರಿಗೆ ಅನುಕೂಲ ಆಗಲು ಬೇರೆ ಬೇರೆ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಈಗಾಗಲೇ ಯುವ ನಿಧಿ ಯೋಜನೆಯ ಅಡಿಯಲ್ಲಿ, ಫಲಾನುಭವಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಇದೀಗ ಕೃಷಿ ನವೋದ್ಯಮ ಎನ್ನುವ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಇದರ ಅಡಿಯಲ್ಲಿ ಕೃಷಿ ಚಟುವಟಿಕೆ ಬಗ್ಗೆ ಆಸಕ್ತಿ ಇರುವ ಯುವಕರು ಹೊಸ ಆವಿಷ್ಕಾರ ತಂತ್ರಜ್ಞಾನ ಮೊದಲಾದವುಗಳನ್ನು ಅಳವಡಿಸಿಕೊಂಡು, ಕೃಷಿ ಸ್ಟಾರ್ಟ್ ಅಪ್ ಆರಂಭಿಸುವುದಕ್ಕೆ 20 ಲಕ್ಷ ರೂಪಾಯಿಗಳ ವರೆಗೆ ಸರ್ಕಾರದಿಂದ ಸಹಾಯಧನ ಪಡೆಯಬಹುದು.

Agricultural Innovation Scheme

ಏನಿದು ನವೋದ್ಯಮ ಯೋಜನೆ?

ಕೃಷಿ ಪದವಿದದರು ವಿದ್ಯಾವಂತ ಆಸಕ್ತ ಯುವಕರು, ಪ್ರಗತಿಪರ ರೈತರು, ತಂತ್ರಜ್ಞಾನಗಳನ್ನು ಆವಿಷ್ಕಾರಗಳನ್ನು ಒಳಗೊಂಡಿರುವ ಕೃಷಿ ಸ್ಟಾರ್ಟ್ ಅಪ್ ಮಾಡಲು ಶೇಕಡಾ 50% ನಷ್ಟು ಅಥವಾ 20 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ ಪಡೆಯಬಹುದಾಗಿದೆ. ಯುವಕರು ಹೆಚ್ಚಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಈ ಯೋಜನೆ ಹೆಚ್ಚು ಉತ್ತೇಜನ ನೀಡುತ್ತದೆ.

ಕೃಷಿ ನವೋದ್ಯಮ ಯೋಜನೆಯಿಂದ ಹೆಚ್ಚು ಲಾಭ:

ಈ ಯೋಜನೆಯ ಅಡಿಯಲ್ಲಿ ಯುವಕರು ಈಗಾಗಲೇ ಆರಂಭಿಸಿರುವ ಸ್ಟಾರ್ಟ್ ಅಪ್ ಉದ್ಯಮವನ್ನು ಮುಂದುವರಿಸಲು ಅಥವಾ ಹೊಸ ಉದ್ಯಮ ಆರಂಭಿಸಲು 50% ಅಥವಾ 20 ರಿಂದ 50 ಲಕ್ಷ ರೂಪಾಯಿಗಳವರೆಗು ಕೂಡ ಸಾಲ ಸೌಲಭ್ಯವನ್ನು ಬ್ಯಾಂಕ್ ನಿಂದ ಪಡೆಯಬಹುದಾಗಿದೆ.

ಜಿಲ್ಲಾಮಟ್ಟದಲ್ಲಿ ತಾಂತ್ರಿಕ ಸಮಿತಿ ಹಾಗೂ ಅನುಷ್ಠಾನ ಸಮಿತಿಯ ಒಪ್ಪಿಗೆ ಪಡೆದ ನಂತರ ರಾಜ್ಯ ಮಟ್ಟದಲ್ಲಿ ಸಹಾಯಧನ ನೀಡಲು ಅನುಮೋದನೆ ಪಡೆದುಕೊಳ್ಳಬಹುದು. ನವೋದ್ಯಮ ಯೋಜನೆಗಾಗಿ ರಾಜ್ಯ ಸರ್ಕಾರ 10 ಕೋಟಿಗಳನ್ನು ಇಂದಿನ ಬಜೆಟ್ ನಲ್ಲಿ ಮೀಸಲಿಟ್ಟಿತ್ತು. ಈ ಅನುದಾನದ ಹಣವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

ಇದನ್ನೂ ಸಹ ಓದಿ : ಈ ಖಾತೆ ಇದ್ದವರ ಅಕೌಂಟ್​​ಗೆ ಬರಲಿದೆ 10 ಸಾವಿರ! ಜೊತೆಗೆ 2 ಲಕ್ಷ ವಿಮಾ ರಕ್ಷಣೆ

ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದು ಹೇಗೆ?

ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಅಥವಾ ಜಂಟಿ ನಿರ್ದೇಶಕರನ್ನು ಸಂಪರ್ಕಿಸಿ ನಿಮ್ಮ ಸ್ಟಾರ್ಟ್ ಅಪ್ ಬಗ್ಗೆ ಮಾಹಿತಿ ನೀಡಿ, ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಈ ಯೋಜನೆಯ ಅಡಿ ತರಬೇತಿ ನೀಡಲಾಗುವುದು:

ಕೃಷಿ ನವೋದ್ಯಮ ಯೋಜನೆಯ ಅಡಿಯಲ್ಲಿ ಧನಸಹಾಯ ಪಡೆದುಕೊಂಡ ಬಳಿಕ ಆಸಕ್ತ ಯುವಕರಿಗೆ ಕೃಷಿ ಚಟುವಟಿಕೆಗಳ ಬಗ್ಗೆ ಅಥವಾ ಹೊಸ ಸ್ಟಾರ್ಟ್ ಅಪ್ ಗಳ ಬಗ್ಗೆ ತರಬೇತಿಯನ್ನು ಕೂಡ ನೀಡಲಾಗುತ್ತದೆ. ತರಬೇತಿ ಸಂಸ್ಥೆಗಳಾಗಿರುವ ವಿಜ್ಞಾನ, ತಂತ್ರಜ್ಞಾನ ವಿಶ್ವವಿದ್ಯಾಲಯಗಳು ICAR, CFTRI, CSIR, C-CAMP ವಿಶ್ವವಿದ್ಯಾಲಯಗಳು, ಜೈವಿಕ ತಂತ್ರಜ್ಞಾನ ಮೊದಲಾದ ಸಂಸ್ಥೆಗಳಲ್ಲಿ ತರಬೇತಿ ಪಡೆಯಬಹುದಾಗಿದೆ.

ಕೃಷಿ ನವೋದ್ಯಮ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಜಂಟಿ ನಿರ್ದೇಶಕರು ನೀಡಿರುವ ಮಾಹಿತಿಯ ಪ್ರಕಾರ ಕೃಷಿ ನವೋದ್ಯಮ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಯುವಕರು ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಬಹುದು.

ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಆನೇಕಲ್ ಮತ್ತು ಬೆಂಗಳೂರು ಉತ್ತರ
ಉಪ ಕೃಷಿ ನಿರ್ದೇಶಕರ ಕಚೇರಿ, ಜಿಲ್ಲಾಡಳಿತ ಭವನ, ಬೀರಸಂದ್ರ, ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೃಷಿ ಸಂಕೀರ್ಣ, ಎಸ್. ಕರಿಯಪ್ಪ ರಸ್ತೆ, ಬನಶಂಕರಿ, ಬೆಂಗಳೂರು
ಸಂಪರ್ಕ ಸಂಖ್ಯೆ: 080-26711594
ಈ ಕಚೇರಿಗಳಿಗೆ ಭೇಟಿ ನೀಡಬಹುದು ಅಥವಾ ಈ ಸಂಪರ್ಕ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ.

ಇತರೆ ವಿಷಯಗಳು:

ಉಚಿತ ಆಧಾರ್ ಕಾರ್ಡ್ ಅಪ್ಡೇಟ್‌ಗೆ ಡೆಡ್‌ಲೈನ್‌! ಮಾರ್ಚ್ 14 ರೊಳಗೆ ಆನ್‌ಲೈನ್‌ನಲ್ಲಿ ಹೀಗೆ ಮಾಡಿ

ಶಿಕ್ಷಕರ ನಿವೃತ್ತಿ ವಯಸ್ಸು ಹೆಚ್ಚಳ! 62 ರಿಂದ 65 ವರ್ಷಕ್ಕೆ ಏರಿಕೆ

ಉಚಿತ ಕರೆಂಟ್ ಬಳಕೆದಾರರಿಗೆ ಬಿಗ್ ಅಪ್ಡೇಟ್! ರಾಜ್ಯ ಸರ್ಕಾರದಿಂದ ಪ್ರಮುಖ ಮಾಹಿತಿ

Leave a Reply

Your email address will not be published. Required fields are marked *