rtgh
Headlines

ಬಜೆಟ್‌ಗೂ ಮುನ್ನ ನರೇಂದ್ರ ಮೋದಿ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್!‌

central budget

ನಮಸ್ತೆ ಕರುನಾಡು, ಕೇಂದ್ರ ಸರ್ಕಾರವು ಫೆಬ್ರವರಿ 1, 2024 ರಂದು ಮಧ್ಯಂತರ ಬಜೆಟ್ ಅನ್ನು ಮಂಡಿಸಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಅನ್ನು ಬಿಡುಗಡೆ ಮಾಡುತ್ತಾರೆ. ವಾಸ್ತವವಾಗಿ ಇದು ಪೂರ್ಣ ಪ್ರಮಾಣದ ಬಜೆಟ್ ಅಲ್ಲ. ಲೋಕಸಭೆ ಚುನಾವಣೆಯ ನಂತರ, ಹೊಸ ಸರ್ಕಾರವು 2024-25 ರ ಹಣಕಾಸು ವರ್ಷಕ್ಕೆ ಸಂಪೂರ್ಣ ಬಜೆಟ್ ಅನ್ನು ಮಂಡಿಸುತ್ತದೆ.

central budget

ಆದರೆ ಈ ಮಧ್ಯಂತರ ಬಜೆಟ್‌ನಲ್ಲಿ ಕೆಲವು ಅಂಶಗಳು ಪ್ರಮುಖವಾಗಲಿವೆ ಎಂದು ವಿಶ್ಲೇಷಕರು ನಂಬಿದ್ದಾರೆ. ವಿಶೇಷವಾಗಿ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತೆ ತೆರಿಗೆ ಸ್ಲ್ಯಾಬ್ ಬದಲಾಗಲಿದೆ ಎಂದು ಹಲವರು ನಿರೀಕ್ಷಿಸುತ್ತಿದ್ದಾರೆ. ಆದರೆ ಬಜೆಟ್ ಭಾಷಣಕ್ಕೆ ಒಂದು ದಿನ ಮೊದಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಶುಭ ಸುದ್ದಿಯೊಂದನ್ನು ನೀಡಿದೆ.

ದೇಶದಲ್ಲಿ ಮೊಬೈಲ್ ಬಿಡಿಭಾಗಗಳ ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ. ಆಮದು ಸುಂಕವನ್ನು ಶೇಕಡಾ 15 ರಿಂದ ಶೇಕಡಾ 10 ಕ್ಕೆ ಇಳಿಸಿರುವುದರಿಂದ ಮುಂದಿನ ದಿನಗಳಲ್ಲಿ ಸೆಲ್ ಫೋನ್‌ಗಳ ಬೆಲೆಗಳು ಗಣನೀಯವಾಗಿ ಕಡಿಮೆಯಾಗಬಹುದು. ಈ ಬಗ್ಗೆ ದೇಶದ ಮೊಬೈಲ್ ತಯಾರಿಕಾ ಉದ್ಯಮ ಸಂತಸ ವ್ಯಕ್ತಪಡಿಸಿದೆ.

ಪ್ರಸ್ತುತ, 5G ಮೊಬೈಲ್‌ಗಳ ಬಳಕೆ ತುಂಬಾ ಹೆಚ್ಚಾಗಿದೆ. ಬಹಳ ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್ ಇರುವ ಮೊಬೈಲ್ ಗಳನ್ನು ಖರೀದಿಸಲು ಹಲವರು ಸಿದ್ಧರಿರುತ್ತಾರೆ. ಈ ಹಿನ್ನಲೆಯಲ್ಲಿ ಮೊಬೈಲ್ ಆಕ್ಸೆಸರೀಸ್ ಆಮದು ಮೇಲಿನ ಸುಂಕ ಕಡಿತವೇ ಮೊಬೈಲ್ ಫೋನ್ ಬೆಲೆ ಇಳಿಕೆಗೆ ಪ್ರಮುಖ ಕಾರಣ ಎನ್ನಬಹುದು. ಮೊಬೈಲ್ ಖರೀದಿಸಲು ಮುಂದಾಗಿರುವವರಿಗೆ ಇದೊಂದು ಸಿಹಿ ಸುದ್ದಿ ಎಂದರೆ ತಪ್ಪಾಗಲಾರದು.

ಇದನ್ನೂ ಸಹ ಓದಿ : ಆಭರಣ ಪ್ರಿಯರಿಗೆ ಭರ್ಜರಿ ಕೊಡುಗೆ.! ಇಂದೇ ಖರೀದಿಸಿ

ಸರ್ಕಾರ ಕೈಗೊಂಡಿರುವ ಈ ನಿರ್ಧಾರವು ಮೇಡ್ ಇನ್ ಇಂಡಿಯಾ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಜಗತ್ತಿಗೆ ಪರಿಚಯಿಸಲು ಸಹಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮೊಬೈಲ್ ತಯಾರಿಕಾ ವ್ಯವಹಾರದಲ್ಲಿ ಚೀನಾ, ವಿಯೆಟ್ನಾಂನಂತಹ ದೇಶಗಳ ಪ್ರತಿಸ್ಪರ್ಧಿಗಳನ್ನು ಸಮರ್ಥವಾಗಿ ಎದುರಿಸಲು ಇದೊಂದು ಉತ್ತಮ ನಿರ್ಧಾರ ಎಂದೇ ಹೇಳಬಹುದು.

ಅದೇ ರೀತಿ ಈ ಮಧ್ಯಂತರ ಬಜೆಟ್ ನಲ್ಲಿ ಸಾಮಾಜಿಕ ಕ್ಷೇತ್ರದ ಯೋಜನೆಗಳಿಗೆ ಹೆಚ್ಚಿನ ಹಣ ಮೀಸಲಿಡುವ ಸಾಧ್ಯತೆ ಇದೆ. ಕೃಷಿ ಆರ್ಥಿಕತೆಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ, ಹಣಕಾಸು ಸಚಿವರು ಗ್ರಾಹಕರ ಬೇಡಿಕೆಯನ್ನು ಹೆಚ್ಚಿಸಲು ಕೆಲವು ಕ್ರಮಗಳನ್ನು ಘೋಷಿಸುತ್ತಾರೆ ಎಂದು ಹೇಳಲಾಗುತ್ತದೆ.

ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ಪೂರ್ಣ ಪ್ರಮಾಣದ ಬಜೆಟ್ ಬದಲಿಗೆ ಮಧ್ಯಂತರ ಬಜೆಟ್ ಮಂಡಿಸಲಾಗುತ್ತಿದೆ ಎಂದು ಗೊತ್ತಾಗಿದೆ. ಇದರಿಂದಾಗಿ ಆಯಾ ಕ್ಷೇತ್ರದ ತಜ್ಞರು ಹಾಗೂ ಜನಸಾಮಾನ್ಯರು ಈ ಬಜೆಟ್ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇತರೆ ವಿಷಯಗಳು:

ಬಜೆಟ್‌ ಮಂಡನೆಯಲ್ಲಿ ದೊಡ್ಡ ಘೋಷಣೆ: ಈ ಎಲ್ಲ ನಿಯಮಗಳಲ್ಲಿ ಭಾರೀ ಬದಲಾವಣೆ

ಫೆಬ್ರವರಿಯಲ್ಲಿ ಬ್ಯಾಂಕ್‌ಗಳಿಗೆ ಬರೋಬ್ಬರಿ ರಜೆ! ಸಂಪೂರ್ಣ ಪಟ್ಟಿ ಇಲ್ಲಿದೆ

ಸ್ವಂತ ಮನೆ ನಿರ್ಮಾಣ ಮಾಡಿ: ಜನರ ಖಾತೆಗೆ ಸರ್ಕಾರದಿಂದ ₹1.20 ಲಕ್ಷ ಜಮಾ

Leave a Reply

Your email address will not be published. Required fields are marked *