rtgh
Headlines

ಉಚಿತ ಕರೆಂಟ್ ಬಳಕೆದಾರರಿಗೆ ಬಿಗ್ ಅಪ್ಡೇಟ್! ರಾಜ್ಯ ಸರ್ಕಾರದಿಂದ ಪ್ರಮುಖ ಮಾಹಿತಿ

gruha jyoti scheme

ನಮಸ್ತೆ ಕರುನಾಡು, ಸರ್ಕಾರದ 5 ಪ್ರಮುಖ ಗ್ಯಾರಂಟಿ ಯೋಜನೆಗಳು ಇಂದು ಯಶಸ್ವಿ ಆಗಿದ್ದು ಜನರ ಮೆಚ್ಚುಗೆ ಪಡೆದುಕೊಂಡಿವೆ. ಯಾಕಂದ್ರೆ ಈ ಎಲ್ಲಾ ಯೋಜನೆಗಳು ಕೂಡ ಜನರಿಗೆ ಹೆಚ್ಚು ಲಾಭದಾಯಕ ಎನಿಸಿವೆ. ಬಡವರಿಗೆ ಉಚಿತವಾಗಿ ನೀಡುವ ಅನ್ನ ಭಾಗ್ಯ ಯೋಜನೆ, ಉಚಿತವಾಗಿ ಪ್ರಯಾಣ ಮಾಡಬಹುದಾದ ಶಕ್ತಿ ಯೋಜನೆ, ಮಹಿಳೆಯರಿಗೆ ತಿಂಗಳ ಖರ್ಚು ನಿಭಾಯಿಸಲು ನೀಡಲಾಗುವ 2000 ರೂ. ಅಥವಾ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆ, ಹಾಗೂ ಬಡವರಿಗೆ ಭರವಸೆಯ ಬೆಳಕು ನೀಡುವ ಗೃಹ ಜ್ಯೋತಿ ಯೋಜನೆ ಎಲ್ಲವೂ ಇಂದು ಯಶಸ್ವಿಯಾಗಿವೆ.

gruha jyoti scheme

ಇದೀಗ ಗೃಹಜ್ಯೋತಿ ಯೋಜನೆಗೆ ಸಂಬಂಧಪಟ್ಟ ಹಾಗೆ ಸಿದ್ದರಾಮಯ್ಯ ಅವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗೃಹ ಜ್ಯೋತಿ ಯೋಜನೆಯಡಿಯಲ್ಲಿ 200 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ಪಡೆದುಕೊಳ್ಳಬಹುದು. ಅದರಲ್ಲೂ ವಾರ್ಷಿಕ ಸರಾಸರಿ ಗೆ 10% ನಷ್ಟು ಹೆಚ್ಚುವರಿಯಾಗಿ ಸರ್ಕಾರ ಒದಗಿಸುತ್ತಿರುವುದರಿಂದ, ಬಡವರು ಮಾತ್ರವಲ್ಲದೆ ಮಧ್ಯಮ ವರ್ಗದವರು ಕೂಡ ಸುಲಭವಾಗಿ ಉಚಿತ ಕರೆಂಟ್ ಬಿಲ್ ಪಡೆದುಕೊಳ್ಳಲು ಸಾಧ್ಯವಾಗಿದೆ.

ಇದನ್ನೂ ಸಹ ಓದಿ : LPG ಸಿಲಿಂಡರ್ ದರ ಮತ್ತೆ ಏರಿಕೆ! ಬಿಡುಗಡೆಯಾಯ್ತು ಹೊಸ ದರಗಳ ಪಟ್ಟಿ

ಗೃಹ ಜ್ಯೋತಿ ಯೋಜನೆಯ ಪ್ರಮುಖ ವಿಷಯಗಳು:

  • ಗೃಹ ಜ್ಯೋತಿ ಯೋಜನೆಗೆ ನೊಂದಣಿ ಆಗಿರುವ 1.65 ಕೋಟಿ ಗ್ರಾಹಕರ ಪೈಕಿ 1.59 ಕೋಟಿ ಕುಟುಂಬಗಳು ಉಚಿತ ವಿದ್ಯುತ್ ಪಡೆದುಕೊಳ್ಳಲು ಸಾಧ್ಯವಾಗಿದೆ.
  • ಸರ್ಕಾರ ಇದ್ದಾಗ 3578 ಕೋಟಿ ಸಬ್ಸಿಡಿಯನ್ನು ಈ ಯೋಜನೆಗಾಗಿ ನೀಡಿದೆ.
  • ಗೃಹಜ್ಯೋತಿ ಯೋಜನೆಯಲ್ಲಿ ಮತ್ತೊಂದು ಬದಲಾವಣೆ ತರಲಾಗಿದ್ದು ವಾರ್ಷಿಕವಾಗಿ ಕೇವಲ 48 ಯೂನಿಟ್ ವರೆಗೆ ವಿದ್ಯುತ್ ಬಳಕೆ ಮಾಡುವವರಿಗೆ ಸರಾಸರಿ ಹೆಚ್ಚುವರಿಗಾಗಿ 10% ನಷ್ಟು ಹೆಚ್ಚುವರಿ ಯೂನಿಟ್ ಬದಲಿಗೆ, 10 ಯೂನಿಟ್ ಅನ್ನು ಹೆಚ್ಚುವರಿ ನೀಡಲಾಗುವುದು. ಇದರಿಂದಾಗಿ 58 ಯೂನಿಟ್ ವಾರ್ಷಿಕ ಸರಾಸರಿ ಆಗುತ್ತದೆ ಹಾಗೂ ಸುಮಾರು 70 ಲಕ್ಷ ಕುಟುಂಬಗಳು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.
  • ಯಾವುದೇ ರೀತಿಯ ವಿದ್ಯುತ್ ವೇಸ್ಟ್ ಆಗದಂತೆ ಹಾಗೂ ಬಡವರಿಗೆ ಕೂಡ ಹೆಚ್ಚಿನ ಪ್ರಯೋಜನ ಆಗುವಂತೆ ಈ ಹೊಸ ನಿಯಮ ಜಾರಿಗೆ ತರಲಾಗಿದೆ 398 ಕೋಟಿ ರೂಪಾಯಿಗಳನ್ನು ಸರ್ಕಾರ ಮೀಸಲಿಟ್ಟಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಗೃಹಜೋತಿ ಯೋಜನೆ ಸಾಕಷ್ಟು ಜನರಿಗೆ ಪ್ರಯೋಜನ ನೀಡಿದೆ. ಆದರೆ ಈಗ 10% ಬದಲು ಹತ್ತು ನಿಮಿಷ ಉಚಿತವಾಗಿ ನೀಡುವುದರಿಂದ ನೂರಕ್ಕೂ ಮೇಲೆ ಯೂನಿಟ್ ಬಳಕೆ ಮಾಡುವ ಕುಟುಂಬದವರಿಗೆ ಸ್ವಲ್ಪ ಸಮಸ್ಯೆ ಉಂಟಾಗಬಹುದು. ಅದನ್ನು ಹೊರತುಪಡಿಸಿ ಬಡವರಿಗೆ ಇದರಿಂದ ಹೆಚ್ಚು ಲಾಭವಾಗಲಿದೆ.

ಇತರೆ ವಿಷಯಗಳು:

ಇ ಶ್ರಮ್‌ ಕಾರ್ಡ್‌ ಹೊಸ ಪಟ್ಟಿ ಬಿಡುಗಡೆ: ಇವರ ಖಾತೆಗೆ 3 ಸಾವಿರ ರೂ. ಜಮಾ

BPL ಕಾರ್ಡುದಾರರಿಗೆ ಮತ್ತೊಂದು ಗುಡ್‌ ನ್ಯೂಸ್!‌ ಅಕ್ಕಿಯ ಜೊತೆ ಪ್ರತಿ ತಿಂಗಳು 1000 ರೂ. ಲಭ್ಯ

ಸೂರ್ಯೋದಯ ಯೋಜನೆ: 1 ಕೋಟಿ ಮನೆಗಳಿಗೆ ಉಚಿತ ಸೋಲಾರ್! ಅರ್ಜಿ ಸಲ್ಲಿಸುವುದು ಹೇಗೆ?

Leave a Reply

Your email address will not be published. Required fields are marked *