rtgh
Headlines

ಸ್ವಂತ ಉದ್ಯೋಗ ಮಾಡೋರಿಗೆ ಸರ್ಕಾರದಿಂದ 5 ಲಕ್ಷ ಸಾಲ! ಅರ್ಜಿ ಹಾಕಿದವರಿಗೆ ಮಾತ್ರ

Self employment loan facility

ನಮಸ್ತೆ ಕರುನಾಡು, ಒಂದು ದೇಶದ ಆರ್ಥಿಕತೆಯ ಮೇಲೆ ಆ ದೇಶದಲ್ಲಿ ಇರುವ ನಿರುದ್ಯೋಗ ಸಮಸ್ಯೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಯುವಕರು ನಿರುದ್ಯೋಗದಿಂದ ಇದ್ದಾಗ ದೇಶದಲ್ಲಿ ಸಾಕಷ್ಟು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಹೀಗಾಗಿ ಪ್ರತಿಯೊಂದು ಸರ್ಕಾರವು ಕೂಡ ತಮ್ಮ ತಮ್ಮ ರಾಜ್ಯದಲ್ಲಿ ಇರುವ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಯುವಕರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತವೆ.

Self employment loan facility

ಇದೀಗ ರಾಜ್ಯ ಸರ್ಕಾರ ದೇಶದಲ್ಲಿ ವಾಸಿಸುವ ನಿರುದ್ಯೋಗಿಗಳಿಗೆ ಸ್ವಂತ ಉದ್ಯಮ ಮಾಡಿಕೊಳ್ಳಲು ಆರ್ಥಿಕ ನೆರವು ನೀಡುತ್ತಿದೆ. ಸರ್ಕಾರದಿಂದ ಸಾಲ ಸೌಲಭ್ಯ ಪಡೆದುಕೊಂಡು, ನಿಮ್ಮ ಕನಸಿನ ಉದ್ಯಮವನ್ನು ಕೂಡ ಆರಂಭಿಸಲು ಸಹಕಾರಿಯಾಗಿದೆ.

ರಾಜ್ಯ ಸರ್ಕಾರದಿಂದ ಸ್ವಂತ ಉದ್ಯೋಗ ಮಾಡಲು ಸಾಲ ಸೌಲಭ್ಯ:

ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಈಗಾಗಲೇ ಬೇರೆ ಬೇರೆ ಯೋಜನೆಗಳ ಮೂಲಕ ಸರ್ಕಾರ ಆರ್ಥಿಕ ನೆರವು ನೀಡುತ್ತಿದೆ. ಅವರ ಸ್ವಾವಲಂಬನೆಯ ಜೀವನಕ್ಕಾಗಿ ಶ್ರಮಿಸುತ್ತಿದೆ. ಇದೀಗ ಆರ್ಥಿಕವಾಗಿ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿರುವ ಬ್ರಾಹ್ಮಣ ಸಮುದಾಯದ ಏಳ್ಗೆಗಾಗಿ ರಾಜ್ಯ ಸರ್ಕಾರ, ಸಾಂದೀಪಿನಿ ಶಿಷ್ಯ ವೇತನ ಹಾಗೂ ಸ್ವಂತ ಉದ್ಯಮ ಮಾಡುವವರಿಗೆ 5 ಲಕ್ಷ ರೂಪಾಯಿಗಳ ಬ್ಯಾಂಕ್ ಸಾಲ ಒದಗಿಸುತ್ತಿದೆ.

ಇದನ್ನೂ ಸಹ ಓದಿ : ಬಜೆಟ್‌ ಭರವಸೆ.! 1 ಕೋಟಿಗೂ ಹೆಚ್ಚು ಮನೆಗಳಿಗೆ ಸೋಲಾರ್‌ ಭಾಗ್ಯ: ನಿರ್ಮಲಾ ಸೀತಾರಾಮನ್‌

ಸ್ವಉದ್ಯೋಗ ಮಾಡುವವರಿಗೆ ಸಹಾಯಧನ:

ಇತ್ತೀಚಿಗೆ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯ ಸರ್ಕಾರದ ಈ ಹೊಸ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಹಿಂದುಳಿದ ಬ್ರಾಹ್ಮಣ ವರ್ಗಕ್ಕೆ ಸೇರಿದವರು, ಮೊಬೈಲ್ ಶಾಪ್, ಹಣ್ಣಿನ ಅಂಗಡಿ, ಹೂವಿನ ಅಂಗಡಿ, ಹೈನುಗಾರಿಕೆ, ಹೊಲಿಗೆ ಕೆಲಸ, ಗುಡಿ ಕೈಗಾರಿಕೆ, ಆಟಿಕೆ ತಯಾರಿಕೆ ಮೊದಲಾದವುಗಳನ್ನು ಮಾಡಿ ಕೊಳ್ಳಲು ಸರ್ಕಾರ 20% ನಷ್ಟು, ಸಹಾಯಧನ ನೀಡುವುದರ ಜೊತೆಗೆ 5 ಲಕ್ಷಗಳ ಸಾಲ ಸೌಲಭ್ಯ ಒದಗಿಸಲಿದೆ ಎಂದಿದ್ದಾರೆ.

ಸಾಂದೀಪಿನಿ ಶಿಷ್ಯವೇತನ:

ಈ ಯೋಜನೆಯ ಅಡಿಯಲ್ಲಿ, ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಮಕ್ಕಳು 10ನೇ ತರಗತಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದರೆ ಅಂತವರಿಗೆ 15,000 ರೂಪಾಯಿಗಳ ಸ್ಕಾಲರ್ಶಿಪ್ ನೀಡಲಾಗುವುದು. ಇನ್ನು ಸಿಇಟಿ ಬರೆದು ಉನ್ನತ ವಿದ್ಯಾಭ್ಯಾಸಕ್ಕೆ ಹೋಗುವವರಿಗೆ ಒಂದು ಲಕ್ಷ ರೂಪಾಯಿಗಳ ವರೆಗೆ ಶಿಷ್ಯವೇತನ ನೀಡಲಾಗುವುದು. ಜನವರಿ 31, 2024, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು ಬ್ರಾಹ್ಮಣ ವರ್ಗದ ವಿದ್ಯಾರ್ಥಿಗಳು ತಕ್ಷಣ ಅರ್ಜಿ ಸಲ್ಲಿಸಿ ಸರ್ಕಾರದಿಂದ ಸ್ಕಾಲರ್ಶಿಪ್ ಪಡೆದುಕೊಳ್ಳಿ.

ಇತರೆ ವಿಷಯಗಳು:

ಹವಾಮಾನ ವರದಿ: ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಎಚ್ಚರಿಕೆ!

ಇಂದಿನಿಂದ ದೇಶಾದ್ಯಂತ ಎಲ್ಲವೂ ಅಗ್ಗ! 10% ರಿಯಾಯಿತಿಯೊಂದಿಗೆ ಬೆಲೆ ಬದಲಾವಣೆ

ರೈತರೇ ನಿಮಗೆ ಈ ಕೃಷಿ ಬಗ್ಗೆ ಗೊತ್ತಾ? ಈ ಹಣ್ಣಿನಿಂದ ಅತಿ ಬೇಗ ಶ್ರೀಮಂತರಾಗಬಹುದು

Leave a Reply

Your email address will not be published. Required fields are marked *